ವಿಕ್ಟರ್ ಜಸಿಂಟೋಫ್ಲೇಚಾ
[ತೆಲುಗಿಗೆ: ವರವರ ರಾವು]
ಪ್ರಯೋಜನ ಇಲ್ಲ
ನಿನ್ನ ಮನೆಯ ಕಗ್ಗತ್ತಲ ಮೂಲೆಯಲಿ ಆಳದಲ್ಲಡಗಿ
ನಿನ್ನ ಮಾತನು ಮರೆಸಿ
ನಿನ್ನ ಪುಸ್ತಕವ ಸುಟ್ಟು
ಪ್ರಯೋಜನವಿಲ್ಲ
ಲಾರಿಗಳಲಿ ರಾಶಿ ರಾಶಿ ಕರಪತ್ರ ಸೇರಿಸಿಟ್ಟು
ನಿನಗ್ಯಾರೂ ಎಂದೂ ಬರೆಯದ ಪತ್ರವ ಹಿಡಿದು
ಅವರು ನಿನ್ನ ಹಿಡಿಯಲು ಬರುವರು
ನೀನೆಂದೂ ಹೋಗದ ದೇಶಗಳ ಮುದ್ರೆಗಳೊಂದಿಗೆ
ನಿನ್ನ ಪಾಸ್ಪೋರ್ಟ್ ತುಂಬಿಬಿಡುವರು
ಯಾವುದೋ ಸತ್ತ ನಾಯಿಯಂತೆ
ನಿನ್ನನವರು ಹೊರಗೆಳೆಯುವರು
ಆ ರಾತ್ರೆ ನೀನು ಹಿಂಸೆಯೆಂದರೇನೆಂದು ತಿಳಿಯುವೆ
ಕತ್ತಲ ಕೋಣೆಯಲಿ
ಪ್ರಪಂಚದ ದುರ್ಗಂಧ ಇಡೀ ಹುಟ್ಟುವೆಡೆ
ನನ್ನ ಗೆಳೆಯ
ಹೋರಾಟದಿಂದಾಗಿ
ನಿನಗೇನೂ ಪ್ರಯೋಜನವಿಲ್ಲ
1 comment:
ಅಬ್ಬ.. ಸಕ್ಕತ್ ಕವನ
Post a Comment