ಎ.ಕೆ.ರಾಮಾನುಜನ್
[ಕನ್ನಡ]
ಪ್ರಾಚೀನ ಚೀನದಲ್ಲಿ ಬುದ್ಧಿವಂತ
ಒಬ್ಬನಿಗೆ ಪ್ರತಿರಾತ್ರಿ
ಕನಸು.
ಪ್ರತಿರಾತ್ರಿ ಮುಸುಂಬಿ-
ಬಣ್ಣದ ಚಿಟ್ಟೆಯಾಗಿ ನೈದಿಲೆಯಿಂದ
ಸೇವಂತಿಗೆ
ಸೇವಂತಿಯಿಂದ ನೈದಿಲೆಗೆ
ಹಾರಿ ಹಾರಿ ಗಾಳಿಯಲ್ಲಿ ತೇಲಿದ ಹಾಗೆ
ಕನಸು.
ಎಷ್ಟೋ ರಾತ್ರಿ ಚಿಟ್ಟೆಯಾಗಿ
ಕನಸು ಕಂಡು ಕಡೆಗೆ
ಮನುಷ್ಯನೋ
ಚಿಟ್ಟೆಯೋ
ರಾತ್ರಿಯ ಚಿಟ್ಟೆ
ಹಗಲು ಮನುಷ್ಯನ ಕನಸೋ
ಹಗಲು
ರಾತ್ರಿಯ ಕನಸೋ
ತಿಳಿಯದೆ ಭ್ರಮೆ ಹಿಡಿಯಿತು
ಗೋಪಾಲಕೃಷ್ಣ ಕುಂಟಿನಿಯ ಕಥೆಗಳಿಗೆ ಮುನ್ನುಡಿ
6 years ago
1 comment:
ಶ್ರೀರಾಂ ಅವರೆ,
ನಿಮ್ಮ ಈ ಪುಟ ಓದುತ್ತಿದ್ದರೆ ಕನ್ನಡದ creme-de-la-creme ಕವಿತೆಗಳ bombardment ನಡೀತಿದೆ ಅನ್ನಿಸಿತು. ಇವತ್ತು ಚೆನ್ನಾಗಿ ಕಳೆಯಲಿದೆ. ಬೇಸರವಾದರೆ ಈ ಪುಟ ಇದ್ದೇ ಇದೆ!!
-ಟೀನಾ.
Post a Comment