ಬರ್ಟೋಲ್ಟ್ ಬ್ರೆಕ್ಟ್
[ಜರ್ಮನ್]
ನನ್ನ ಪುಟ್ಟಮಗ ನನ್ನನ್ನು ಕೇಳುತ್ತಾನೆ - ಲೆಕ್ಕ ಕಲಿಯಲೇಬೇಕಾ?
ಹೌದು ಕಲಿತೇನು ಪ್ರಯೋಜನ ಅಂತ ಹೇಳಬೇಕು - ಎರಡು ಚೂರು
ರೊಟ್ಟಿ, ಒಂದಕ್ಕಿಂತ ಹೆಚ್ಚೆಂದು ಕಲಿಯುವಿದಕ್ಕಿಂತ ಮಿಗಿಲೇನಿದೆ?
ನನ್ನ ಪುಟ್ಟ ಮಗ ನನ್ನನ್ನು ಕೇಳುತ್ತಾನೆ - ಫ್ರೆಂಚ್ ಭಾಷೆ ಕಲಿಯಬೇಕಾ?
ಹೌದು ಕಲಿತೇನು ಪ್ರಯೋಜನ ಅಂತ ಹೇಳಬೇಕು - ಆ ರಾಷ್ಟ್ರ ಕುಸಿಯುತ್ತಿದೆ
ನಿನ್ನ ಹೊಟ್ಟೆಯನ್ನು ಕೈಯಿಂದ ಉಜ್ಜಿ ನಿಟ್ಟುಸಿರಿಟ್ಟರೆ
ಯಾವ ತೊಂದರೆಯೂ ಇಲ್ಲದೇ ನಿನಗಿದೆಲ್ಲ ಅರ್ಥವಾಗುತ್ತದೆ.
ನನ್ನ ಪುಟ್ಟ ಮಗ ನನ್ನನ್ನು ಕೇಳುತ್ತಾನೆ - ಚರಿತ್ರೆ ಕಲಿಯಬೇಕಾ?
ಹೌದು ಕಲಿತೇನು ಪ್ರಯೋಜನ ಅಂತ ಹೇಳಬೇಕು - ನಿನ್ನ ತಲೆಯನ್ನು
ಭೂಗರ್ಭದಲ್ಲಿ ಹುದುಗಿಟ್ಟರೆ ಬದುಕುವುದನ್ನ ಕಲಿಯುವೆ ಅಂತ.
ಹೌದು ಲೆಕ್ಕ ಕಲಿ ಅಂತ ನಾನವನಿಗೆ ಹೇಳುತ್ತೇನೆ,
ಜೊತೆಗೆ ಫ್ರೆಂಚ್ ಮತ್ತು ಚರಿತ್ರೆ!
Noise and Clutter
6 years ago
2 comments:
ಈ ಕವನಗಳನ್ನೆಲ್ಲಾ ಕೈ ಬರಹದಲ್ಲಿ ಬರೆದು ಸ್ಕಾನ್ ಮಾಡಿ ಪ್ರಕಟಿಸಿದರೆ ಹೇಗೆ? ಕೈ ಬರಹಗಳನ್ನು ಪ್ರಮೋಟ್ ಮಾಡಿದಂತೆ ಆಗಬಹುದಲ್ಲವೇ?
ಕಷ್ಟ. ಯಾರ ಕೈಬರಹ? ಮೂಲ ಕವಿಗಳ ಕೈಬರಹಗಳನ್ನು ತರುವುದೆಲ್ಲಿಂದ. ನನ್ನ ಕೈಬರಹವಾದರೆ ಅದಕ್ಕೆ ವಿಶೇಷ ಅರ್ಥವಿರುವುದಿಲ್ಲ ಅಲ್ಲವೇ?
ಶ್ರೀರಾಮ್
Post a Comment